Репост из: VKINGDOM-Chase your Dreams📚(All exams )
CET ಆಕಾಂಕ್ಷೆಗಳ ಗಮನಕ್ಕೆ .....
• PSI 402 ಎಕ್ಸಾಮ್ ಮುಗಿದ ನಂತರ ಮತ್ತು Key answers ಬಿಟ್ಟಾಗ ಸಾವಿರಾರು ಆಕಾಂಕ್ಷಿಗಳು ನನ್ನೊಂದಿಗೆ ತಮ್ಮ ಅಂಕಗಳನ್ನು ಹಂಚಿಕೊಂಡಿದ್ದರು.
ಇದರಲ್ಲಿ ಕೆಲವರು ಸರ್ ನಂದು 45(ಇಲ್ಲೇ Questions count ಮಾಡಲಾಗಿದೆ ) ಆಗಿದೆ. Select ಆಗುತ್ತಾ.ನನ್ನ circle ಅಲ್ಲಿ ನಂದೇ Highest, ಸುಮಾರು ಜನ ನನ್ನ Friends (ಇಲ್ಲಿ ಸುಮಾರು ಅಂದ್ರೆ ಅವನ ಪ್ರಕಾರ, 10-15) ನನಗಿಂತ ಕಮ್ಮಿ ತಗೊಂಡರ, ಅವರೆಲ್ಲ ಧಾರವಾಡ ಬಿಜಾಪುರ್, ಬೆಂಗಳೂರು ಅಲ್ಲಿ 2-3 ವರ್ಷದಿಂದ ಓದತಾ ಇದಾರೆ.. ನಂದು ಆಗುತ್ತಾ?
ನಾನು ಹೇಳಿದ್ದೆ ಕಮ್ಮಿ ಐತ್ರಿ, 60 ಆದ್ರೆ Safest score, 55 ಆದ್ರೆ chance ಇದೆ ಅಂತ..
ಅದಕ್ಕೆ ಅವರು ಹೇ ಇವನು ಏನೋ 402 ಪೇಪರ್ ಎಷ್ಟು taugh ಇತ್ತು. ಇದರಲ್ಲಿ ನಮ್ಮ ರಾಜ್ಯದಲ್ಲಿ ಯಾರು ಕೂಡ 60 ಮಾಡಿರಕ್ಕೆ ಸಾಧ್ಯನೇ ಇಲ್ಲ. ನಂದೇ Top ಅಂತ ಅಂದಿದ್ದು ಗಮನಕ್ಕೆ ಬಂದಿತ್ತು.
ಇವಾಗ Rank list ನೋಡಿ. ಪೇಪರ್ -2 ಅಲ್ಲಿ 60+ ಕ್ಕಿಂತ ಜಾಸ್ತಿ (ಅಂದ್ರೆ 90+ marks ) ತಗೊಂಡವರು 150+ ಜನ ಅದರ.
60 ತಗೊಂಡವರು ನಮ್ಮ ರಾಜ್ಯದಲ್ಲಿ ಯಾರು ಇಲ್ಲ ಅಂದವರು ಇವಾಗ 1000+ rank ಅಲ್ಲಿ ಇದಾರೆ..
ಇದೆ ತರ VAO score ಕೂಡ. 110-115 ತಗೊಂಡು ನನ್ನ ಸುತ್ತ ಮುಟ್ಟ ಯಾರು ನನ್ನಷ್ಟು ತಗೊಂಡಿಲ್ಲ, 130+ ತಗೊಳ್ಳಿಕ್ಕೆ ಸಾಧ್ಯನೇ ಇಲ್ಲ ಅನ್ನೋ Discussions ನಾ ನೋಡಿದ್ದೇನೆ. ನೆನಪಿರಲಿ ಇದು BA, B. COM exam ಅಲ್ಲಾ. 60-70 ಜನ ಒಂದ್ class ಅಲ್ಲಿದ್ದಾಗ ನಾನೆ Top ಅನ್ನಕ್ಕೆ. ಇಡಿ ರಾಜ್ಯ Exam ಬರಿಯುತ್ತೆ. ಹಗಲು ರಾತ್ರಿ, ಒಳ್ಳೆ reference books, ಒಳ್ಳೆ ಮಾರ್ಗದರ್ಶನ ತಗೊಂಡು ಓದುವ ಸಾವಿರಾರು ಜನ ಇರುತ್ತಾರೆ.
VAO ಅಲ್ಲಿನೂ ಕೂಡ 130+ ತಗೊಂಡವರು ಹಲವು ಜನ ಇದಾರೆ. KEA ಅವರು VAO ದು ಕೂಡ Districtwsise marks list ಬಿಡತಾರೆ. ಅವಾಗ ನಿಮ್ಮ Top score ಗೊತ್ತಾಗುತ್ತೆ.
So what i am trying to tell u is..
Competitive World ಅನ್ನೋದು ನಿಮ್ಮ ಸುತ್ತಮುತ್ತಲಿನ 10-15 ಜನ, ಧಾರವಾಡ ಬೆಂಗಳೂರು ಅಲ್ಲಿ, 4, 5 ವರ್ಷದ ಓದುವವರ Criteria ಅಲ್ಲಾ.
Select ಆಗುವ 70% ಜನ ಆಯ್ಕೆ ಆಗುವ ತನಕ ಎಲ್ಲೂ score share ಮಾಡಲ್ಲ.. ಇನ್ನೂ ಈ Telegram, whats up inst ಅಲ್ಲಿ ಅಂತೂ ಅವರು select ಆಗಿ order copy ತಗೊಂಡು report ಆಗಿದ್ದ ದಿನ ಮಾತ್ರ ಹಾಕ್ತರೆ...
ಒಂದು exam ಅಧ್ಮೇಕೆ ಆಯ್ಕೆ ಆಗಲಿ, ಆಗದೆ ಇರಲಿ.... ನಿಮಗೆ ನಿಮ್ಮ ತಪ್ಪುಗಳ ಅರಿವು ಆಗಬೇಕು. ಮುಂದಿನ exam ಅಲ್ಲಿ ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಅಂದಾಗ next select ಆಗ್ತೀರಿ...
ಮುಂದೆ ಬರುವ PSI (ನೆನಪಿರಲಿ, ಇನ್ನೂ 4-5 ತಿಂಗಳು PSI notification ಆಗೋದು doubt.ಯಾಕಾಗಲ್ಲ ಅನ್ನೋದು Its common sense ) ನೇಮಕಾತಿಗೆ ಓದುವವರು Common sense ಜಾಸ್ತಿ ಇರಲಿ, Select ಆಗಬೇಕು ಅಂದ್ರೆ ಧಾರವಾಡ, ಬಿಜಾಪುರ್ ಬೆಂಗಳೂರು ಅಲ್ಲಿರ್ಬೇಕು ಅಂತೆನೂ ಇಲ್ಲ.. 2 ವರ್ಷದ, 4 ವರ್ಷ ಟೈಮ್ line ಬೇಕಿಲ್ಲ... 2014 ರಲ್ಲಿ ನನ್ನ ಜೊತೆ exam ಗೆ ಬಂದವರು ಇನ್ನೂ ಧಾರವಾಡ ದಲ್ಲಿನೆ PSI ಆಗ್ತಾನೆ ಅಂತಾನೆ ಅದರ..
There is no single readymade Approach for Success in CET...
Individual, unique personal approach works lot...
ಮುಂದೆ PSI notification ಅಧ್ಮೇಕೆ Books purchase ಮಾಡ್ತೀನಿ, Coaching join ಆಗ್ತೀನಿ, ಧಾರವಾಡ ಬೆಂಗಳೂರು ಹೋಗ್ತೀನಿ ಅಂದ್ಕೊಂಡರೆ ಹೋಗಿ exam ಬರೀತೀರಿ.. ಆಯ್ಕೆ ಆಗೋದು ಅಷ್ಟು ಸುಲಭವಲ್ಲ.
Notification ಇಲ್ಲದೆ ಇದ್ದಾಗ plan ಮಾಡ್ಕೊಂಡು ಎಲ್ಲಾ books ನ ಓದಿ, ಕೋಚಿಂಗ್ ಮುಗಿಸಿ, 2-3 ಸಲ ಓದಿ ready ಇರಬೇಕು...
ಅವಾಗ question paper ಹೇಗಾದ್ರು ಇರಲಿ....
ಇದನೆಲ್ಲ ಹೇಳಬೇಕು ಅಂದ್ರೆ ಅದರಲ್ಲಿ Succeed ಆದ್ರೆ ಮಾತ್ರ experience ಇರುತ್ತೆ.
ತುಂಬಾ ಜನರ message ಗೆ reply ಹಾಕಷ್ಟು time ಇರಲ್ಲ, so ಎಲ್ರಿಗೂ ಅರ್ಥ ಆಗುತ್ತೆ ಅಂತ share ಮಾಡಿದ್ದು....
Notification ಇಲ್ಲದೆ ಇದ್ದಾಗ 2-3 ತಿಂಗಳು ತಿಂಗಳಿಗೆ, 10-15 ಸಾವಿರ ಕೊಡುವ ಕೆಲಸ ಮಾಡಿ, 30-40 ಸಾವಿರ ದುಡ್ಡು ಮಾಡಿಕೊಂಡು ಮುಂದೆ 6-7 ತಿಂಗಳು ಓದಕ್ಕೆ ಇಟ್ಕೊಳ್ಳಿ... ಬರಿ problems ಅಂತ ಹೇಳ್ಕೊಂಡು ತಿರುಗಿದ್ರೆ ಏನೂ use ಇಲ್ಲ...
Govt job ತಗೋಬೇಕು ಅಂದ್ರೆ ತಗೊಂಡೆ ಹೋಗಿ... ಸುಮ್ನೆ ಮಂದಿ PSI ಆಗ್ತಾರೆ, ಯಾರೋ Instagram ಅಲ್ಲಿ, Facebook ಅಲ್ಲಿ Uniform ಹಾಕೊಂಡು, ಬುಲೆಟ್ ಮೇಲೆ ಗಾಗಲ್ ಹಾಕಿ, ಫೋಟೋ ಹಾಕೊಂಡ್ ಫೋಟೋ ನೋಡಿ ನಾನು PSI ಆಗ್ತೀನಿ, ಸಿಂಗಂ ಅಂತ ಹವಾ ಮಾಡ್ತೀನಿ ಅಂದ್ರೆ ಆಗಲ್ಲ.... ಓದಿ, ನಿಮ್ಮನ್ನು ನೀವು ಅರಿತು ಓದಿ, Competition ತಿಳಿದುಕೊಂಡು ಓದಿ....
POLICE Uniform ಅದರಲ್ಲೂ PSI uniform Look ಯಾರಿಗೆ ಹಾಕಿದ್ರು Hero, Superman ತರನೇ ಕಾಣತಾರೆ.. ಯಾಕಂದ್ರೆ ಆ Star uniform ಇರೋದೇ ಹಾಗೆ...
ಓದುವ Capacity ಇದ್ದವನಿಗೆ PSI ಒಂದು Exam ಅಷ್ಟೇ.
ಇಲ್ಲದೆ ಇರೋನಿಗೆ ಅದೊಂದು ಜೀವಮಾನದ ಕನಸು...
ಆಗುತ್ತೆ ಓದಿ..