SR W🌍RLD (5 ಲಕ್ಷ ಸದಸ್ಯರು)


Kanal geosi va tili: Hindiston, Tamilcha
Toifa: Martaba


ಖಚಿತ ಮಾಹಿತಿಯ ಉಚಿತ ವೇದಿಕೆ.!!
Billion People's Beliefs.!!
This is official channel of SR WORLD.
Plz send ur Suggestions & feedback to us 9538781570
Tell my mistakes to me only not to others,
Bcz
My mistakes are to be rectified by me, not by others.

Связанные каналы  |  Похожие каналы

Kanal geosi va tili
Hindiston, Tamilcha
Toifa
Martaba
Statistika
Postlar filtri


★ ನೇಮಕಾತಿಗಳು & ಲಾಸ್ಟ್ ಡೇಟ್: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻

ಈ ಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಲು ಅವಕಾಶವಿರುವ ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿಯನ್ನು ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.

⚫ UPSC: 979 Civil Services (IAS, IPS, IRS) & 150 IFS Posts Last Date: February-18.
https://t.me/SRWORLDShankarBellubbiSir/33282

⚫ SC / ST ವಿದ್ಯಾರ್ಥಿಗಳಿಗಾಗಿ KAS / Banking / IBPS / SSC / Judicial Services & Group-C  Exam ಗೆ Free Coaching ನೀಡಲು ಅರ್ಜಿ ಆಹ್ವಾನ Last Date February-20.
https://t.me/SRWORLDShankarBellubbiSir/33285

⚫ SBI ನಲ್ಲಿ 50+ Specialist Cadre Officer (SCO) Posts: Last Date: February-24
https://t.me/SRWORLDShankarBellubbiSir/33422

⚫ SSLC ಯವರಿಗೆ ಅಂಚೆ ಇಲಾಖೆಯಲ್ಲಿ 21,413 Posts: Last Date: March-03
https://t.me/SRWORLDShankarBellubbiSir/33488

⚫ ಬೆಂಗಳೂರಿನ High court ನಲ್ಲಿ 158 Posts: Last Date: March-12
https://t.me/SRWORLDShankarBellubbiSir/33451




AEE ಪರೀಕ್ಷಾ ಅಕ್ರಮ.!!.pdf
460.4Kb
AEE ಪರೀಕ್ಷಾ ಅಕ್ರಮ:
✍🏻📃✍🏻📃✍🏻📃✍🏻📃

⚫ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರು (Assistant Executive Engineer Grade-1) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ 2023 ಜುಲೈ-02 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಾರೀ ಅಕ್ರಮ.!!

⚫ OMR Sheet ತಿದ್ದುಪಡಿ ಮಾಡಿ ಆಯ್ಕೆಯಾದ ಅಭ್ಯರ್ಥಿಗಳ ನೇಮಕ ರದ್ದು.?

⚫ ಪ್ರತಿ ನೇಮಕಾತಿಯಲ್ಲಿಯೂ ಕೂಡಾ ಹೀಗೆ ಸರಣಿ ಅಕ್ರಮಗಳು ನಡೆಯುತ್ತಿದ್ದರೂ ಕೂಡಾ ಬದಲಾವಣೆ ಮಾಡಲು ಬಯಸದ ಬದಲಾಗದ ಆಳುವವರನ್ನು ಆಯ್ಕೆ ಮಾಡಲು ಬಯಸುವ ಜನರೇ ಇದರ ನೇರ ಹೊಣೆಗಾರಿಕೆಯನ್ನು ಹೊರಬೇಕಿದೆ.!
ಪಾಪ ಉದ್ಯೋಗಾಕಾಂಕ್ಷಿಗಳೇ ಇಲ್ಲಿ ಬಲಿಪಶುಗಳು.!!

⚫ ಅಭ್ಯರ್ಥಿಗಳು "ವಶೀಲಿಯಿಂದ ಆಯ್ಕೆ"ಯಾದರೆ ಅಕ್ರಮವೇ ಸಕ್ರಮವಾಗಿ, ಅಪ್ರಾಮಾಣಿಕತೆಯೇ ಪ್ರಾಮಾಣಿಕತೆಯಾಗಿ, ಅವಿಶ್ವಾಸವೇ ವಿಶ್ವಾಸವಾಗಿ, ಅಸಮರ್ಥರೆಲ್ಲಾ ಸಮರ್ಥರಾಗಿ, ಅಧಕ್ಷರೆಲ್ಲಾ ಧಕ್ಷರಾಗಿ, ರಾಜ್ಯದ ಹಲವು ಇಲಾಖೆಗಳು ಅಪ್ರಾಮಾಣಿಕರ, ಅಸಮರ್ಥರ, ಅಧಕ್ಷರ, ಅವಿಶ್ವಾಸಿಗಳ ಗೂಡಾಗುವುದರಲ್ಲಿ ಸಂದೇಹವೇ ಇಲ್ಲ.!!
🌻🍁🌻🍁🌻🍁🌻🍁🌻🍁🌻




CoachingInstituteListKASMains2425.pdf
155.3Kb
KAS FC: Institute List:
✍🏻🍁✍🏻🍁✍🏻🍁✍🏻🍁

⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯಲ್ಲಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ SC / ST ಅಭ್ಯರ್ಥಿಗಳಿಗೆ ಮಾತ್ರ ಸಮಾಜ ಕಲ್ಯಾಣ ವತಿಯಿಂದ KAS Mainsಗೆ Free Coaching ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಈ ಕೆಳಗಿನ ಲಿಂಕ್ ನಲ್ಲಿ 20-02-2025 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.!!
https://swdservices.karnataka.gov.in/petccoaching/KASMainsHomeKan.aspx

⚫ 1 ತಿಂಗಳು Offline ನಲ್ಲಿ ಮಾತ್ರ Free Coaching ನೀಡಲಾಗುತ್ತಿದ್ದು, ಆಯ್ಕೆ ಮಾಡಿಕೊಳ್ಳಬಹುದಾದ Institute List ನ್ನು ಇದೀಗ ಪ್ರಕಟಿಸಲಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻




PressnoteGPKMS.pdf
304.8Kb
KPSC PRESS NOTE:
✍🏻🍁✍🏻🍁✍🏻🍁✍🏻🍁

♣️ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿ ಗೊಂದಲಕ್ಕೆ ಸಂಬಂಧಿಸಿದಂತೆ ಸಮಜಾಯಿಷಿ ಉತ್ತರ ನೀಡಲು KPSC ಇದೀಗ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.!!

♣️ ಉಳಿದಿಲ್ಲ ಪರೀಕ್ಷೆಗಳ ಕಟ್ ಆಫ್ ಅಂಕ ಪ್ರಕಟಿಸಿದ KPSC, KAS Prelims Result ಪ್ರಕಟಿಸಿ 4-5 ದಿನಗಳೇ ಕಳೆದರೂ ಕಟ್ ಆಫ್ ಅಂಕಗಳನ್ನು ಇದುವರೆಗೂ ಪ್ರಕಟಿಸದೇ ಇರುವುದು ಲಕ್ಷಾಂತರ ಅಭ್ಯರ್ಥಿಗಳ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.! ಕಟ್ ಆಫ್ ಅಂಕ ಏಕೆ ಪ್ರಕಟಿಸಿಲ್ಲ & ಪ್ರಕಟಿಸದಿರಲು ಇರುವ ತೊಂದರೆಗಳಾದರೂ ಏನು.? ಎಂಬ ಸ್ಪಷ್ಟನೆ ನೀಡದೇ ಇರೋದು ವಿಪರ್ಯಾಸ.!!
✍🏻🍁✍🏻🍁✍🏻🍁✍🏻🍁✍🏻🍁


Pn_AT_Download.pdf
194.6Kb
KPSC: HALL TICKET:
✍🏻📋✍🏻📋✍🏻📋✍🏻📋✍🏻

ವಿವಿಧ ಇಲಾಖೆಗಳ (HK ಮೂಲ ವೃಂದದ) ವಿವಿಧ ಹುದ್ದೆಗಳ ನೇಮಕಾತಿಗೆ KPSC ಯು 2025 ಫೆಬ್ರವರಿ -23 ರಂದು ನಡೆಸಲಿರುವ Paper-1: ಸಾಮಾನ್ಯ ಪತ್ರಿಕೆ (General Paper) ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
https://kpsconline.karnataka.gov.in/HomePage/Index.html
✍🏻📋✍🏻📋✍🏻📋✍🏻📋✍🏻




KAS Latest Updates:
✍🏻🍁✍🏻🍁✍🏻🍁✍🏻🍁

⚫ ವಿಶೇಷ ಸೂಚನೆ: ಇದು ಯಾರನ್ನೂ ಖುಷಿ ಪಡಿಸಲಿಕ್ಕೂ ಅಲ್ಲ & ಯಾರಿಗೂ ನೋವು ಮಾಡಲಿಕ್ಕೂ ಅಲ್ಲ, ಆದರೆ ಪ್ರಸ್ತುತ ಬೆಳವಣಿಗೆಯನ್ನು ತಮ್ಮ ಮುಂದೆ ಇಡುವುದಕ್ಕೆ ಮಾತ್ರ ಎಂಬುದನ್ನು ಸ್ಪಷ್ಟ ಪಡಿಸುತ್ತಾ ಈ ಮಾಹಿತಿ ಹಂಚಿಕೊಳ್ಳಲಾಗಿದೆ.!!

⚫ KPSC (KAS) ಫಲಿತಾಂಶ ತಡೆಹಿಡಿಯಲು ಖ್ಯಾತ ಸಾಹಿತಿ ಮಾನ್ಯ ಶ್ರೀ ಬರಗೂರು ರಾಮಚಂದ್ರಪ್ಪರವರು ಆಗ್ರಹಿಸಿದ್ದಾರೆ.!!
https://www.prajavani.net/news/karnataka-news/baraguru-ramachandrappa-demands-to-hold-kpsc-results-3169434

⚫ 2025 ಫೆಬ್ರವರಿ-18 ರಂದು ಬೃಹತ್ ಮಟ್ಟದ ಹೋರಾಟಕ್ಕೆ ಕರೆ ನೀಡಿದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಮಾನ್ಯ ಶ್ರೀ ನಾರಾಯಣಗೌಡ್ರು, ಸಹಸ್ರಾರು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಹೋರಾಟ ಮಾಡಲಿದ್ದಾರೆ.!!
https://x.com/narayanagowdru/status/1890612259614867624?t=1IPm_xL6PHG8DDGGaRdPOg&s=35
&
https://www.prajavani.net/news/karnataka-news/injustice-to-kannadigas-in-kas-exam-massive-protest-in-bengaluru-on-february-18th-karnataka-rakshana-vedike-3170304

⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Result ನ್ನು ಪ್ರಕಟಿಸಿ 4-5 ದಿನಗಳೇ ಕಳೆದರೂ KPSC ಇದರ ಕಟ್ ಆಫ್ ಅಂಕಗಳನ್ನು ಇದುವರೆಗೂ ಪ್ರಕಟಿಸದೇ ಇರುವುದು ಲಕ್ಷಾಂತರ ಅಭ್ಯರ್ಥಿಗಳ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.!! ಏತನ್ಮದ್ಯೆ Mains Exam Date ಪ್ರಕಟಿಸಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ 2025 ಫೆಬ್ರವರಿ-17 ರಿಂದ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸೂಚಿಸಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ.!!
✍🏻🍁✍🏻🍁✍🏻🍁✍🏻🍁✍🏻🍁




ಅರ್ಜಿಗೆ ಇಂದೇ ಲಾಸ್ಟ್‌ ಡೇ:
✍🏻📃✍🏻📃✍🏻📃✍🏻📃✍🏻

ಕೃಷಿ ಇಲಾಖೆಯಲ್ಲಿನ 128 Agriculture Officer (AO) & 817 Asst. Agriculture Officer (AAO) ಹುದ್ದೆಗಳಿಗೆ 20-09-2024 ರಂದು KPSC ಪ್ರಕಟಿಸಿದ ಅಧಿಸೂಚನೆಗೆ B.Sc Agree / B.Tech ಪದವೀಧರರು ಅರ್ಜಿ ಸಲ್ಲಿಸಲು ಇಂದೇ (15-02-2025) ಕೊನೆಯ ದಿನ.!!

ಸಂಪೂರ್ಣ ಮಾಹಿತಿಯನ್ನೊಳಗೊಂಡ ಮೂಲ ಅಧಿಸೂಚನೆ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
https://t.me/SRWORLDShankarBellubbiSir/32185
✍🏻📋✍🏻📋✍🏻📋✍🏻📋✍🏻📋


ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋

ರಾಜ್ಯಾದ್ಯಂತ ಎಲ್ಲಾ ಇಲಾಖೆಗಳಲ್ಲೂ ಅಧಿಕಾರಿ & ಸಿಬ್ಬಂದಿಯ ಕೊರತೆ ಇದೆ. ಆದ್ದರಿಂದ ಯಾವ್ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಕಲೆ ಹಾಕಿ ಆದಷ್ಟು ಬೇಗ ನೇಮಕಾತಿ ಮಾಡುವಂತೆ ಸರಕಾರಕ್ಕೆ ವರದಿ ಸಲ್ಲಿಸುತ್ತೇನೆ.!!
-ಮಾನ್ಯ ಶ್ರೀ ಬಿ. ವೀರಪ್ಪ (ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು)
📋✍🏻📋✍🏻📋✍🏻📋✍🏻📋




Video oldindan ko‘rish uchun mavjud emas
Telegram'da ko‘rish
ಬದುಕು ಬದಲಿಸುವ ಮಾತು:
✍🏻🪴✍🏻🪴✍🏻🪴✍🏻🪴✍🏻🪴

ಸ್ಪರ್ಧಾತ್ಮಕ ಪರೀಕ್ಷೆಗೆ ಓದೋಕೆ ಅಂತಾ ಬಂದು, ಲವ್-ಗಿವ್ ಅಂತಾ ಟೈಮ್ ಪಾಸ್ ಮಾಡ್ತೀರೋ ಹುಡುಗ & ಹುಡುಗಿಯರಿಗಾಗಿ ಈ ವಿಡಿಯೋ ಕ್ಲಿಪ್.!!

ನೀವು ಇಲ್ಲಿ ಬಂದಿದ್ದೇತಕ್ಕೆ.? ಮಾಡಬೇಕಾಗಿದ್ದೇನು.?? ಮಾಡುತ್ತಿರುವುದೇನು.??? ಈ 3 ಪ್ರಶ್ನೆಗಳಿಗೆ ಪ್ರತಿದಿನವೂ ಉತ್ತರ ಕಂಡುಕೊಳ್ಳಿ.!!

ನೀವು ಇಂದು ಏನು ಮಾಡುತ್ತೀರೋ ಅದನ್ನು 10 ವರ್ಷದ ನಂತರ ನೀವೇ ನೆನಪಿಸಿಕೊಂಡಾಗ ನಿಮಗೆ ನಿಮ್ಮ ಬಗ್ಗೆ ಹೆಮ್ಮೆ ಎನಿಸುವಂತ ಕಾರ್ಯ ಮಾಡಿ, ನಾಚಿಕೆಯಾಗುವಂತಹ ಅಸಹ್ಯವಾಗುವಂತಹ ಕೆಲಸಗಳನ್ನು ಯಾವತ್ತೂ ಮಾಡಬೇಡಿ.!!

ನೀವು ಓದುತ್ತಿರುವಾಗ ನಿಮ್ಮನ್ನು ಓದಿಸಲು ಕಷ್ಟಪಡುತ್ತಿರುವ ನಿಮ್ಮ ಹೆತ್ತವರ ಕಷ್ಟಗಳು ನಿಮ್ಮ ಕಣ್ಣುಮುಂದೆ ಬರಲಿ ಅವು ನಿಮ್ಮನ್ನು ಯಾವತ್ತಿಗೂ ತಪ್ಪು ದಾರಿ ತುಳಿಯದಂತೆ ಎಚ್ಚರಿಸುತ್ತಿರಲಿ.!!


ನನ್ನ ಮಗ(ಳು) ಏನೋ ಆಗಿ ಬರತಾನೆ(ಳೆ) ಅಂತಾ ಕಾಯುತ್ತಿರುವ ನಿಮ್ಮ ಹೆತ್ತವರ ಹತ್ತಿರ ಏನೇನೋ ಆಗಿ ಹೋಗಬೇಡಿ, ನಿಮ್ಮ ಜವಾಬ್ದಾರಿಯನ್ನು ಮರೆಯಬೇಡಿ.!!

20 ವರ್ಷಗಳಿಂದ ನಿಮ್ಮನ್ನು ಸಾಕಿ-ಸಲುಹಿದ ತಂದೆ-ತಾಯಿಗಳ ಪ್ರೀತಿಯನ್ನು, ಕೇವಲ 20 ದಿನದಲ್ಲಿ ಬಂದವರ ಪ್ರೀತಿಯು ನುಂಗದಂತೆ ನೋಡಿಕೊಳ್ಳಿ.!!

ನೀವು ಮಾಡುತ್ತಿರುವ ತಪ್ಪು ಯಾರಿಗೂ ಗೊತ್ತಾಗಿಲ್ಲ ಎಂದು ನೀವು ತಿಳಿದಿದ್ದರೆ ಅದು ನಿಮ್ಮ ಅತಿ ದೊಡ್ಡ ಮೂರ್ಖತನ.!!

ಇನ್ನಾದರೂ ಬದಲಾಗಿ, ಓದಿ, ಸಾಧಿಸಿ.
ಆಲ್ ದಿ ಬೆಸ್ಟ್.!!
✍🏻💐✍🏻💐✍🏻💐✍🏻💐✍🏻💐




SBI Prelims Call Letter:
✍🏻📃✍🏻📃✍🏻📃✍🏻📃✍🏻

ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿನ 13,735 Junior Associates ಹುದ್ದೆಗಳ ನೇಮಕಾತಿಯ Online Preliminary Exam ಗೆ ಸಂಬಂಧಿಸಿದಂತೆ ಈ ಕೆಳಗಿನ ಲಿಂಕ್ ನಲ್ಲಿ 01-03-2025 ರೊಳಗಾಗಿ Online Prelims Call Letter ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ:
https://ibpsonline.ibps.in/sbidrjadec24/oecla_jan25/login.php?appid=0702148b6410c597301e7f89dbf6380f
✍🏻📃✍🏻📃✍🏻📃✍🏻📃✍🏻


IBPS: Mains Score:
💜🤍💜🤍💜🤍💜🤍

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ Specialist Officers (CRP SPL-XIV) ಹುದ್ದೆಗಳ ನೇಮಕಾತಿಗಾಗಿ ನಡೆಸಿದ Online Mains Exam Score ನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದ್ದು, 2025 ಫೆಬ್ರವರಿ-20 ರ ವರೆಗೆ ಮಾತ್ರ ನೋಡಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpsp14jul24/scda1_febe25/login.php?appid=641bd8b3a4fb554895705e1ad5b74e57
💜🤍💜🤍💜🤍💜🤍💜




history by spardhaarivu.pdf
6.5Mb
👆🏻👆🏻👆🏻👆🏻👆🏻👆🏻👆🏻👆🏻
New Book Released:
✍🏻📋✍🏻📋✍🏻📋✍🏻📋

"ಸ್ಪರ್ಧಾ ಅರಿವು" ಸಾರಥ್ಯದಲ್ಲಿ ಮೊದಲ ಮುದ್ರಣಗೊಂಡಿರುವ ಈ ಹೊಚ್ಚ ಹೊಸ ಪುಸ್ತಕ ಇದೀಗ ನಿಮ್ಮ ಮುಂದೆ.!!

★ "ಕರ್ನಾಟಕ ಇತಿಹಾಸ" ★
(ಸಂಸ್ಕೃತಿ & ಪರಂಪರೆ)

ತಲೆಗೆ ಹತ್ತದ ಹತ್ತು ಪುಸ್ತಕಗಳನ್ನು
ಒಂದು ಬಾರಿ ಓದುವ ಬದಲು,
ಮಸ್ತಕದಲ್ಲಿ ಮಸ್ತ್ ಆಗಿ ಉಳಿಯುವಂತಹ
ಒಂದೇ ಪುಸ್ತಕವನ್ನು ಹತ್ತು ಬಾರಿ
ಓದುವುದರಲ್ಲಿ ಯಶಸ್ಸು ಅಡಗಿದೆ.!

ಮಸ್ತಕಕ್ಕೆ REST ಕೊಡದೇ, TWIST ಇಲ್ಲದೇ
ಓದಬಹುದಾದ BEST ಪುಸ್ತಕವಿದು.!!

ಶೀಘ್ರದಲ್ಲಿಯೇ ನಡೆಯುವ KAS ಮುಖ್ಯ ಪರೀಕ್ಷೆಗೆ ಹಾಗೂ ರಾಜ್ಯ & ಕೇಂದ್ರ ಸರ್ಕಾರದ ಎಲ್ಲಾ ರೀತಿಯ Group-C ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಈ ಹೊಸ ಪುಸ್ತಕವನ್ನು ಹೊರತಂದಿದ್ದಾರೆ. ಅಭ್ಯರ್ಥಿಗಳು ಈ ಉತ್ತಮ ಪುಸ್ತಕದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.!!

ಸ್ಪರ್ಧಾ ಅರಿವು ಆ್ಯಪ್ ನಿಂದಲೂ ಕೂಡಾ Order ಮಾಡಬಹುದಾದ ಈ ಪುಸ್ತಕ ಪಡೆಯಲು ನಿಮ್ಮ ಸಹಾಯಕ್ಕಾಗಿ ಸಂಪರ್ಕಿಸಿ:
90084 96009 / 99805 23231
✍🏻📋✍🏻📋✍🏻📋✍🏻📋✍🏻

20 ta oxirgi post ko‘rsatilgan.